ಎಂಎಸ್ಐಎಲ್ ನ ಅಧ್ಯಕ್ಷರಾದ ಶ್ರೀ ಪುಟ್ಟರಂಗಶೆಟ್ಟಿ, ಎಂಎಲ್ಎ ಅವರು ಚಾಮರಾಜನಗರದಲ್ಲಿ ಎಂಎಸ್ಐಎಲ್ ಚಿಟ್ ಫಂಡ್ ನ ನೂತನ ಶಾಖೆಯನ್ನು ಉದ್ಘಾಟಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್, ಐಎಫ್ಎಸ್ ಹಾಗು ಹಿರಿಯ ಅಧಿಕಾರಿಗಳು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು..
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಂಎಸ್ಐಎಲ್ ವತಿಯಿಂದ ನೀಡಲಾದ 2.5 ಕೋಟಿ ರೂಪಾಯಿ ದೇಣಿಗೆಯ ಚೆಕ್ ಅನ್ನು ವಾಣಿಜ್ಯ ಮತ್ತು ಕೈಗರಿಕಾ ಸಚಿವರಾದ ಮಾನ್ಯ ಶ್ರೀ ಎಂ ಬಿ ಪಾಟೀಲ್ ಮತ್ತು ಶ್ರೀ. ಪುಟ್ಟರಂಗಶೆಟ್ಟಿ , ಶಾಸಕರು ಮತ್ತು ಅಧ್ಯಕ್ಷರು, ಎಂಎಸ್ಐಎಲ್, ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಂಎಸ್ಐಎಲ್ ಅಭಿವೃದ್ಧಿ ಮತ್ತು ಕಾರ್ಯವೈಖರಿ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಯಿತು. ಶ್ರೀ. ಮನೋಜ್ ಕುಮಾರ್, IFS, ವ್ಯವಸ್ಥಾಪಕ ನಿರ್ದೇಶಕರು ಎಂಎಸ್ಐಎಲ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಚೆಕ್ ವಿತರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ 3 ದಿನಗಳ ಇಂಡಿಯನ್ ಪ್ರೀಮಿಯರ್ ಟ್ರಾವೆಲ್ಸ್ ಮತ್ತು ಟೂರ್ಸ್ ಪ್ರದರ್ಶನ ದಲ್ಲಿ ಎಂಎಸ್ಐಎಲ್ ತನ್ನ 'ಪ್ರವಾಸ ಮತ್ತು ಪ್ರಯಾಣ' ಮಳಿಗೆ ಸ್ಥಾಪಿಸಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗುತ್ತಿದೆ. ಈ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮನೋಜ್ ಕುಮಾರ್, IFS, ಅವರುನ್ನು ಸಂಸ್ಥೆಯ ಅಧಿಕಾರಿಗಳು ಸ್ವಾಗತಿಸಿ, ಎಂಎಸ್ಐಎಲ್ ಮಳಿಗೆ ಕಾರ್ಯ ನಿರ್ವಹಿಸುತ್ತಿರುವ ವಿಧಾನವನ್ನು ವಿವರಿಸಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ವನ ಮಹೋತ್ಸವ 2024 ರಲ್ಲಿ ಎಂಎಸ್ಐಎಲ್ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿತು. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಎಂಎಸ್ಐಎಲ್ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು. ಶ್ರೀ ಮನೋಜ್ ಕುಮಾರ್, ಐಎಫ್ಎಸ್ ವ್ಯವಸ್ಥಾಪಕ ನಿರ್ದೇಶಕರು ಎಂಎಸ್ಐಎಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಪುಟ್ಟರಂಗಶೆಟ್ಟಿ, ಅಧ್ಯಕ್ಷರು ಎಂಎಸ್ಐಎಲ್ ಮತ್ತು ಶ್ರೀ ಮನೋಜ್ ಕುಮಾರ್, ಐಎಫ್ಎಸ್ ವ್ಯವಸ್ಥಾಪಕ ನಿರ್ದೇಶಕರು ಎಂಎಸ್ಐಎಲ್ ಅವರು ಸಮಾಜ ಕಲ್ಯಾಣ ಸಚಿವರಾದ ಶ್ರೀ ಎಚ್ಸಿ ಮಹದೇವಪ್ಪ ಅವರನ್ನು ಭೇಟಿ ಮಾಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್, ಐಎಎಸ್ ಮತ್ತು ಆಯುಕ್ತರಾದ ಡಾ.ರಾಕೇಶ್ ಕುಮಾರ್, ಐಎಎಸ್ ಉಪಸ್ಥಿತರಿದ್ದರು. ಇಲಾಖೆಯಿಂದ ಹೆಚ್ಚಿನ ವ್ಯವಹಾರವನ್ನು ಒದಗಿಸುವ ಮೂಲಕ ಎಂಎಸ್ಐಲ್ ಗೆ ಬೆಂಬಲ ನೀಡುವಂತೆ ಎಂಎಸ್ಐಲ್ ಅಧ್ಯಕ್ಷರು ಗೌರವಾನ್ವಿತ ಸಚಿವರಿಗೆ ವಿನಂತಿಸಿದರು. ಎಂಎಸ್ಐಲ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರಯತ್ನಕ್ಕೆ ಶ್ರೀ ಹೆಚ್.ಸಿ.ಮಹದೇವಪ್ಪ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.
ಬೆಂಗಳೂರಿನ ಸ್ಥಾಪಕರ 515ನೇ ಜನ್ಮದಿನದ ಸ್ಮರಣಾರ್ಥ ಎಂಎಸ್ಐಎಲ್ನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಹಾಗು ಎಂಎಸ್ಐಎಲ್ ಅಧ್ಯಕ್ಷರಾದ ಶ್ರೀ ಪುಟ್ಟರಂಗಶೆಟ್ಟಿ, ಶ್ರೀ ಮನೋಜ್ ಕುಮಾರ್, ಐಎಫ್ಎಸ್, ಎಂಡಿ ಎಂಎಸ್ಐಎಲ್ ಮತ್ತು ಎಂಎಸ್ಐಎಲ್ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಸರ ದಿನಾಚರಣೆಯ ಅಂಗವಾಗಿ ಎಂಎಸ್ಐಎಲ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (csr) ಅಡಿಯಲ್ಲಿ ಆನೇಕಲ್ ವಲಯ ಭೂತನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ 10.06.2024 ರಂದು ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮನೋಜ್ ಕುಮಾರ್, ಭಾ.ಆ.ಸೇ ಮತ್ತು ಶ್ರೀ. ಎ. ಎಮ್. ಚಂದ್ರಪ್ಪ, ನಿರ್ದೇಶಕರು ಭಾಗವಹಿಸಿದ್ದರು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಶ್ರೀ. ರವೀಂದ್ರ ಕುಮಾರ್ ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀ. ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಎಂಎಸ್ಐಎಲ್ ಸಂಸ್ಥೆಯ ಕಾರ್ಯನಿರ್ವಾಹಕರುಗಳು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಿನಾಂಕ 19.06.2024 ಹಾಗೂ 20.06.2024 ಎಂಎಸ್ಐಎಲ್ ಸಂಸ್ಥೆಯ ಮಾನ್ಯ ಅಧ್ಯಕ್ಷರಾದ ಶ್ರೀ. ಪುಟ್ಟರಂಗಶೆಟ್ಟಿ ಮತ್ತು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮನೋಜ್ ಕುಮಾರ್. ಭಾ.ಆ. ಸೇ ರವರು ಮುಂಬೈ ನಲ್ಲಿರುವ ಕರ್ನಾಟಕ ಭವನಕ್ಕೆ ಭೇಟಿ ನೀಡಿ ಕಟ್ಟಡ ಪರಿವೀಕ್ಷಣೆ ಮಾಡಿದರು. ಹಾಗೆಯೇ ಮುಂಬೈನ ಶಾಖಾ ಕಚೇರಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಯೋಜನಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಬಿ. ಚಂದ್ರಶೇಖರ್ ರವರು ಸಹ ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವ
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಎಂಎಸ್ಐಎಲ್ ಪ್ರಧಾನ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಎಂಎಸ್ಐಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್, ಐಎಫ್ಎಸ್ ಅವರು ಧ್ವಜ ರೋಹಣವನ್ನು ಮಾಡಿದರು. ಸಂಸ್ಥೆಯ ಹಲವು ಹಿರಿಯ ಅಧಿಕಾರಿಗಳು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ
ಶ್ರೀ ಮನೋಜ್ ಕುಮಾರ್, IFS, MD ಎಂಎಸ್ಐಎಲ್ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಎಂಎಸ್ಐಎಲ್ ಸ್ಟಾಲ್ ಅನ್ನು ಉದ್ಘಾಟಿಸಿದರು
ಇಲಾಖೆಗಳು
ನಮ್ಮ ವಿಭಾಗಗಳು
ಚಿಟ್ ಫಂಡ್
ಚಿಟ್ ಉದ್ಯಮದಲ್ಲಿ ಸಾಮಾಜಿಕ ನಿಯಂತ್ರಣವನ್ನು ತರುವ ಉದ್ದೇಶದಿಂದ ಎಂಎಸ್ಐಎಲ್ 2005ರಲ್ಲಿ ಚಿಟ್ಫಂಡ್ಸ್ ವ್ಯವಹಾರ ಆರಂಭಿಸಿದೆ.
ಮತ್ತಷ್ಟು ಓದು +ಪಾನೀಯ
ಸರ್ಕಾರವು ವಹಿಸಿಕೊಟ್ಟ ವಿವಿಧ ಕಾರ್ಯಯೋಜನೆಗಳನ್ನು ನಿರ್ವಹಿಸುವಲ್ಲಿ ಎಂಎಸ್ಐಎಲ್ ದೋಷರಹಿತ ದಾಖಲೆಯನ್ನು ಹೊಂದಿದೆ. ದೊಡ್ಡ...
ಮತ್ತಷ್ಟು ಓದು +ಪ್ರವಾಸಗಳು
ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದಲ್ಲಿನ ತೀವ್ರ ಏರಿಕೆಯನ್ನು ಪರಿಗಣಿಸಿ, ಎಂಎಸ್ಐಎಲ್ 90ರ ದಶಕದಲ್ಲಿ ಟೂರ್ಸ್ ಮತ್ತು ಟ್ರಾವೆಲ್ಸ್ ವಿಭಾಗವನ್ನು ಪ್ರಾರಂಭಿಸಿತು...
ಮತ್ತಷ್ಟು ಓದು +ಪೇಪರ್
ಐದು ದಶಕಗಳಿಂದ ಎಂಎಸ್ಐಎಲ್ ತನ್ನ ಪ್ರಸಿದ್ಧ ಬ್ರಾಂಡ್ಗಳಾದ “ವಿದ್ಯಾ” ಮತ್ತು “ಲೇಖಕ್” ಹೆಸರಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ನೋಟ್ ಬುಕ್ಗಳಿಗಾಗಿ...
ಮತ್ತಷ್ಟು ಓದು +ಐಪಿಡಿ
ಕೈಗಾರಿಕಾ ಉತ್ಪನ್ನಗಳ ವಿಭಾಗವು ‘ಹಾಟ್ ಸ್ಟಿಂಗ್’ ಮತ್ತು “ಎಂಎಸ್ಐಎಲ್ ಲೈಟ್ಸ್’ ಬ್ರಾಂಡ್ ಹೆಸರಿನಲ್ಲ್ಲಿ ಸೌರ ವಾಟರ್ ಹೀಟರ್ ಮತ್ತು ಸೌರ ವಿದ್ಯುತ್ ಪ್ಯಾಕ್ಗಳ ಮಾರಾಟದ ಬಗ್ಗೆ ವ್ಯವಹರಿಸುತ್ತz...
ಮತ್ತಷ್ಟು ಓದು +ಸಿಪಿಡಿ
ಕೈಗಾರಿಕಾ ಉತ್ಪನ್ನಗಳ ವಿಭಾಗವು ‘ಹಾಟ್ ಸ್ಟಿಂಗ್’ ಮತ್ತು “ಎಂಎಸ್ಐಎಲ್ ಲೈಟ್ಸ್’ ಬ್ರಾಂಡ್ ಹೆಸರಿನಲ್ಲ್ಲಿ ಸೌರ ವಾಟರ್ ಹೀಟರ್ ಮತ್ತು ಸೌರ ವಿದ್ಯುತ್ ಪ್ಯಾಕ್ಗಳ ಮಾರಾಟದ ಬಗ್ಗೆ ವ್ಯವಹರಿಸುತ್ತz...
ಮತ್ತಷ್ಟು ಓದು +ಅವರು ಏನು ಹೇಳುತ್ತಾರೆ
ಪ್ರಶಂಸಾಪತ್ರಗಳು
MSIL Chit Funds has helped me save for my children’s education and to construct my dream home. Since it is a Government entity my money is safe with MSIL.
Dayanand
Vidya Lekhak book has been my preferred notebook. Unmatched quality at reasonable prices
Ajay (Student)
Jan Aushadhi from MSIL has helped me get my regular medicines at lower prices. Thank you MSIL.