ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದಲ್ಲಿನ ಅವಕಾಶಗಳನ್ನು ಪರಿಗಣಿಸಿ, ಎಂಎಸ್‍ಐಎಲ್ ಸಂಸ್ಥೆಯು 90ರ ದಶಕದಲ್ಲಿ ಟೂರ್ಸ್ ಮತ್ತು ಟ್ರಾವೆಲ್ಸ್ ವಿಭಾಗವನ್ನು ಪ್ರಾರಂಭಿಸಿತು. ಈ ವಿಭಾಗವನ್ನು ಸ್ಥಾಪಿಸಿದ ನಂತರ ಕಳೆದ 25 ವರ್ಷಗಳಲ್ಲಿ ಸಂಸ್ಥೆಯು ಸೇವಾ ವಲಯದಲ್ಲಿ ಉನ್ನತ ಗುಣಮಟ್ಟವನ್ನು ಉಳಿಸಿಕೊಂಡು ಜನಪ್ರಿಯತೆಯನ್ನು ಗಳಿಸಿದೆ. ಸಂಸ್ಥೆಯು ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲದೆ ಹೆಚ್ಚಿನ ಸ್ಪರ್ಧಾತ್ಮಕ ದರದಲ್ಲಿ ದೇಶಿಯ ಮತ್ತು ಅಂತರರಾಷ್ಟ್ರೀಯ ಪ್ಯಾಕೇಜ್‍ಗಳನ್ನು ನಿರ್ವಹಿಸುತ್ತದೆ. ಸಾಂಸ್ಥಿಕ ಪ್ರಯಾಣ, ಐತಿಹಾಸಿಕ, ತೀರ್ಥಯಾತ್ರೆ ಮುಂತಾದ ಪ್ರವಾಸಗಳನ್ನು ಒಳಗೊಂಡಿರುವ ಪ್ಯಾಕೇಜ್‍ಗಳನ್ನು ನೀಡುತ್ತದೆ. ಪ್ರಯಾಣಿಕರಿಗೆ ನಿರ್ದಿಷ್ಟ ಪ್ಯಾಕೇಜ್‍ಗಳಲ್ಲಿ ಭರವಸೆ ನೀಡಿದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಕುಟುಂಬಗಳು, ಗುಂಪುಗಳು, ಸಂಸ್ಥೆಗಳು ಇತ್ಯಾದಿಗಳಿಗೆ ಅಗತ್ಯಕ್ಕೆ ತಕ್ಕಂತೆ ಪ್ಯಾಕೇಜ್‍ಗಳನ್ನು ಎಂಎಸ್‍ಐಎಲ್ ನೀಡುತ್ತದೆ.


ಅಂತರರಾಷ್ಟ್ರೀಯ ಪ್ರವಾಸಗಳು
ಕಸ್ಟಮೈಸ್ ಪ್ರವಾಸಗಳು
ದೇಶೀಯ ಪ್ರವಾಸಗಳು

ಎಂಎಸ್ಐಎಲ್ ಟೂರ್ ಗ್ಯಾಲರಿ