ಫಾರ್ಮಸಿ
ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿ
ಸಾಮಾನ್ಯ ಜನರ ಬಗೆಗಿನ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಭೀತುಪಡಿಸುತ್ತಾ ಎಂಎಸ್‍ಐಎಲ್ ಸಂಸ್ಥೆಯು 2015ರಲ್ಲಿ ಔಷಧೀಯ ಕ್ಷೇತ್ರಕ್ಕೆ ಕಾಲಿಟ್ಟಿತು. ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡ ಮತ್ತು ಮಾಧ್ಯಮ ವರ್ಗದ ಜನರಿಗೆ ಗುಣಮಟ್ಟದ ಔಷದಿಗಳು ಲಭ್ಯವಾಗುವಂತೆ ಮಾಡಲು, ಭಾರತ ಸರ್ಕಾರ ‘ಜೆನೆರಿಕ್ ಔಷಧಿಗಳನ್ನು’ ಮಾರಾಟ ಮಾಡುವುದಕ್ಕಾಗಿ ದೇಶಾದ್ಯಂತ ‘ಜನೌಷಧಿ ವೈದ್ಯಕೀಯ ಮಳಿಗೆಗಳನ್ನು’ ತೆರೆಯುವ ಮೂಲಕ ಭಾರತ ಜನೌಷಧಿ ಯೋಜನೆಯನ್ನು ಪ್ರಾರಂಭಿಸಿದೆ. ಬ್ರಾಂಡೆಡ್ ಔಷಧಿಗಳು ಬಡವರಿಗೆ ತುಂಬಾ ದುಬಾರಿಯಾಗಿರುವುದರಿಂದ ‘ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧದ ಲಭ್ಯತೆಯನ್ನು’ ಖಚಿತಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯುವ ಕೆಲಸವನ್ನು ಸರ್ಕಾರವು ಎಂಎಸ್‍ಐಎಲ್‍ಗೆ ವಹಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಡಲ್ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 87 ಜನೌಷಧಿ ಮಳಿಗೆಗಳು ವಿವಿಧ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ.