ಎಲ್ಲರಿಗೂ ನಮಸ್ಕಾರ ಮತ್ತು ಸ್ವಾಗತ,

ಎಂಎಸ್‍ಐಎಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೈಸೂರ್ ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್ 1966ರಲ್ಲಿ ಸ್ಥಾಪನೆಯಾಗಿದ್ದು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೋಳಪಟ್ಟ ಉದ್ಯಮವಾಗಿದೆ. ಎಂಎಸ್‍ಐಎಲ್ ಸ್ಪಾಪಿಸುವ ಉದ್ದೇಶವು ಸರ್ಕಾರಿ ಸ್ವಾಮ್ಯದ ಉತ್ಪನ್ನಗಳನ್ನು ಉತ್ತಮ ವ್ಯಾಪ್ತಿ ಮತ್ತು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಒಂದು ವೇದಿಕೆಯನ್ನು ಒದಗಿಸುವದಾಗಿದೆ.

ಪ್ರಾರಂಭದಿಂದಲೂ ಸಂಸ್ಥೆಯು ದೇಶಾದ್ಯಂತ ಅದರ ಮೂಲಸೌಕರ್ಯಗಳೊಂದಿಗೆ ಕ್ರಿಯಾತ್ಮಕ ಮಾರ್ಕೆಟಿಂಗ್ ವೇದಿಕೆಯಾಗಿ ಹೊರಹೊಮ್ಮಿದೆ. ಅಸಾಧಾರಣ ಬೆಳವಣಿಗೆಯೊಂದಿಗೆ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಸಂಸ್ಥೆಯ ಉಪಸ್ಥಿತಿಯು ಅದರ ಸಾಮರ್ಥ್ಯದೊಂದಿಗೆ ನಿಜವಾದ ಸಾಕ್ಷಿಯಾಗಿದೆ. ಅದರ ಬದ್ದತೆ ಮತ್ತು ಬಹುಮುಖ ಮಾನವಶಕ್ತಿ ಮತ್ತು ಕ್ರಿಯಾತ್ಮಕ ಮಾರುಕಟ್ಟೆ ಅಗತ್ಯಗಳಿಗೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯದೊಂದಿಗೆ, ಎಂಎಸ್‍ಐಎಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಹೊಂದಿದೆ.

ಸರ್ಕಾರವು ವಹಿಸಿಕೊಟ್ಟ ಅನೇಕ ಯೋಜನೆಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳು ಮತ್ತು ಸೇವೆಗಳನ್ನು ಎಂಎಸ್‍ಐಎಲ್ ಯಶಸ್ವಿಯಾಗಿ ನಿರ್ವಹಿಸಿದೆ. ಎಂಎಸ್‍ಐಎಲ್ ಸಂಸ್ಥೆಯು ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆಗಳನ್ನು ನೀಡುವುದರ ಮೂಲಕ ತನ್ನ ಗ್ರಾಹಕರು, ವ್ಯಾಪಾರ ಸಹವರ್ತಿಗಳು ಮತ್ತು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿಕೊಂಡಿದೆ.

ಇಂದು ಎಂಎಸ್‍ಐಎಲ್ ದೇಶಾದ್ಯಂತ ತನ್ನ ಮಾರುಕಟ್ಟೆ ಉಪಸ್ಥಿತಿಯೊಂದಿಗೆ ಸಾಕಷ್ಟು ಬೆಳೆದಿದೆ ಮತ್ತು ಲಾಭವನ್ನು ಸ್ಥಿರವಾಗಿ ಸಾಧಿಸಿದ ಕೆಲವೇ ಸರ್ಕಾರಿ ವಲಯದ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಲು ನನಗೆ ಹೆಮ್ಮೆ ಇದೆ. ಸಂಸ್ಥೆಯ ಪ್ರಮುಖ ವ್ಯವಹಾರ ಚಟುವಟಿಕೆಗಳಲ್ಲಿ ಚಿಲ್ಲರೆ ಮದ್ಯ, ಚಿಟ್ ಫಂಡ್, ಪೇಪರ್ ಮತ್ತು ಸ್ಟೇಷನರಿ, ಕೈಗಾರಿಕಾ ಮತ್ತು ಗ್ರಾಹಕ ಉತ್ಪನ್ನಗಳು, ಪ್ರವಾಸಗಳ ವ್ಯವಸ್ಥೆ ಮುಂತಾದ ವಿವಿಧ ಉತ್ಪನ್ನಗಳು ಮತ್ತು ಸೇವೆಗಳು ಸೇರಿವೆ.

ಸಂಸ್ಥೆಯು ಇತ್ತೀಚೆಗೆ ಮುಕ್ತಾಯಗೊಂಡ 2020-21ರ ಆರ್ಥಿಕ ವರ್ಷದಲ್ಲಿ ರೂ.2,72,065.81 ಲಕ್ಷ(ತಾತ್ಕಾಲಿಕ) ವಹಿವಾಟು ನಡೆಸಿ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 16.54% ಬೆಳವಣಿಗೆಯನ್ನು ಕಂಡಿದೆ. ನಮ್ಮ ಮಾರಾಟಜಾಲ ಮತ್ತು ಗ್ರಾಹಕರ ನೆಲೆಯನ್ನು ಬಲಪಡಿಸುವ ಮೂಲಕ ನಮ್ಮ ವ್ಯವಹಾರ ಚಟುವಟಿಕೆಗಳನ್ನು ಹೆಚ್ಚಿಸಲು ನಾವು ಬದ್ದರಾಗಿದ್ದೇವೆ. ಯಶಸ್ಸಿನ ಈ ಪ್ರಯಾಣದಲ್ಲಿ, ನಮ್ಮ ಎಲ್ಲಾ ಗ್ರಾಹಕರಿಗೆ ಮತ್ತು ವ್ಯಾಪಾರ ಸಹವರ್ತಿಗಳಿಗೆ ಸಂಸ್ಥೆಯ ಬೆಳವಣಿಗೆಗೆ ನೀಡಿದ ಬೆಂಬಲ ಹಾಗೂ ಪ್ರೋತ್ಸಾಹಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಉತ್ತಮ ಫಲಿತಾಂಶಗಳನ್ನು ನೀಡಲು ನಮ್ಮ ತಂಡಕ್ಕೆ ಸ್ಪೂರ್ತಿಯ ಮೂಲವಾಗಿದೆ ಎಂದು ನಾನು ನಂಬುತ್ತೇನೆ.

ನಮ್ಮ ಗ್ರಾಹಕರಿಗೆ ಅಗತ್ಯವಿರುವಾಗ ಅವರೊಂದಿಗೆ ಇರುವುದರ ಮೂಲಕ ಹೆಚ್ಚಿನ ಮೌಲ್ಯವನ್ನು ತರಲು ಶ್ರಮಿಸುವುದಾಗಿ ನಾನು ಮತ್ತಷ್ಟು ಭರವಸೆ ನೀಡುತ್ತೇನೆ. ಎಂಎಸ್‍ಐಎಲ್ ಸಂಸ್ಥೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡಲು ನಿಮ್ಮೆಲ್ಲರಿಂದ ಅಮೂಲ್ಯವಾದ ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ನಾನು ಎದುರು ನೋಡುತ್ತೇನೆ.

ಶುಭಾಶಯಗಳೊಂದಿಗೆ,
ತಮ್ಮ ವಿಶ್ವಾಸಿ

ಮನೋಜ್ ಕುಮಾರ್, ಐಎಫ್ಎಸ್
ವ್ಯವಸ್ಥಾಪಕ ನಿರ್ದೇಶಕರು

ದೂರವಾಣಿ: 080-22255414
ಇ-ಮೇಲ್: [email protected]