ದಿನಾಂಕ 19.06.2024 ಹಾಗೂ 20.06.2024 ಎಂಎಸ್ಐಎಲ್ ಸಂಸ್ಥೆಯ ಮಾನ್ಯ ಅಧ್ಯಕ್ಷರಾದ ಶ್ರೀ. ಪುಟ್ಟರಂಗಶೆಟ್ಟಿ ಮತ್ತು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮನೋಜ್ ಕುಮಾರ್. ಭಾ.ಆ. ಸೇ ರವರು ಮುಂಬೈ ನಲ್ಲಿರುವ ಕರ್ನಾಟಕ ಭವನಕ್ಕೆ ಭೇಟಿ ನೀಡಿ ಕಟ್ಟಡ ಪರಿವೀಕ್ಷಣೆ ಮಾಡಿದರು. ಹಾಗೆಯೇ ಮುಂಬೈನ ಶಾಖಾ ಕಚೇರಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಯೋಜನಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಬಿ. ಚಂದ್ರಶೇಖರ್ ರವರು ಸಹ ಉಪಸ್ಥಿತರಿದ್ದರು.


ಪರಿಸರ ದಿನಾಚರಣೆಯ ಅಂಗವಾಗಿ ಎಂಎಸ್ಐಎಲ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (csr) ಅಡಿಯಲ್ಲಿ ಆನೇಕಲ್ ವಲಯ ಭೂತನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ 10.06.2024 ರಂದು ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮನೋಜ್ ಕುಮಾರ್, ಭಾ.ಆ.ಸೇ ಮತ್ತು ಶ್ರೀ. ಎ. ಎಮ್. ಚಂದ್ರಪ್ಪ, ನಿರ್ದೇಶಕರು ಭಾಗವಹಿಸಿದ್ದರು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಶ್ರೀ. ರವೀಂದ್ರ ಕುಮಾರ್ ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀ. ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಎಂಎಸ್ಐಎಲ್ ಸಂಸ್ಥೆಯ ಕಾರ್ಯನಿರ್ವಾಹಕರುಗಳು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಬೆಂಗಳೂರಿನ ಸ್ಥಾಪಕರ 515ನೇ ಜನ್ಮದಿನದ ಸ್ಮರಣಾರ್ಥ ಎಂಎಸ್‌ಐಎಲ್‌ನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಹಾಗು ಎಂಎಸ್‌ಐಎಲ್ ಅಧ್ಯಕ್ಷರಾದ ಶ್ರೀ ಪುಟ್ಟರಂಗಶೆಟ್ಟಿ, ಶ್ರೀ ಮನೋಜ್ ಕುಮಾರ್, ಐಎಫ್‌ಎಸ್, ಎಂಡಿ ಎಂಎಸ್‌ಐಎಲ್ ಮತ್ತು ಎಂಎಸ್‌ಐಎಲ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಶ್ರೀ ಪುಟ್ಟರಂಗಶೆಟ್ಟಿ, ಅಧ್ಯಕ್ಷರು ಎಂಎಸ್‌ಐಎಲ್ ಮತ್ತು ಶ್ರೀ ಮನೋಜ್ ಕುಮಾರ್, ಐಎಫ್‌ಎಸ್ ವ್ಯವಸ್ಥಾಪಕ ನಿರ್ದೇಶಕರು ಎಂಎಸ್‌ಐಎಲ್ ಅವರು ಸಮಾಜ ಕಲ್ಯಾಣ ಸಚಿವರಾದ ಶ್ರೀ ಎಚ್‌ಸಿ ಮಹದೇವಪ್ಪ ಅವರನ್ನು ಭೇಟಿ ಮಾಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್, ಐಎಎಸ್ ಮತ್ತು ಆಯುಕ್ತರಾದ ಡಾ.ರಾಕೇಶ್ ಕುಮಾರ್, ಐಎಎಸ್ ಉಪಸ್ಥಿತರಿದ್ದರು. ಇಲಾಖೆಯಿಂದ ಹೆಚ್ಚಿನ ವ್ಯವಹಾರವನ್ನು ಒದಗಿಸುವ ಮೂಲಕ ಎಂಎಸ್ಐಲ್ ಗೆ ಬೆಂಬಲ ನೀಡುವಂತೆ ಎಂಎಸ್ಐಲ್ ಅಧ್ಯಕ್ಷರು ಗೌರವಾನ್ವಿತ ಸಚಿವರಿಗೆ ವಿನಂತಿಸಿದರು. ಎಂಎಸ್ಐಲ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರಯತ್ನಕ್ಕೆ ಶ್ರೀ ಹೆಚ್.ಸಿ.ಮಹದೇವಪ್ಪ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.


ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ವನ ಮಹೋತ್ಸವ 2024 ರಲ್ಲಿ ಎಂಎಸ್‌ಐಎಲ್ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿತು. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಎಂಎಸ್‌ಐಎಲ್ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು. ಶ್ರೀ ಮನೋಜ್ ಕುಮಾರ್, ಐಎಫ್‌ಎಸ್ ವ್ಯವಸ್ಥಾಪಕ ನಿರ್ದೇಶಕರು ಎಂಎಸ್‌ಐಎಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ 3 ದಿನಗಳ ಇಂಡಿಯನ್ ಪ್ರೀಮಿಯರ್ ಟ್ರಾವೆಲ್ಸ್ ಮತ್ತು ಟೂರ್ಸ್ ಪ್ರದರ್ಶನ ದಲ್ಲಿ ಎಂಎಸ್ಐಎಲ್ ತನ್ನ 'ಪ್ರವಾಸ ಮತ್ತು ಪ್ರಯಾಣ' ಮಳಿಗೆ ಸ್ಥಾಪಿಸಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗುತ್ತಿದೆ. ಈ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮನೋಜ್ ಕುಮಾರ್, IFS, ಅವರುನ್ನು ಸಂಸ್ಥೆಯ ಅಧಿಕಾರಿಗಳು ಸ್ವಾಗತಿಸಿ, ಎಂಎಸ್ಐಎಲ್ ಮಳಿಗೆ ಕಾರ್ಯ ನಿರ್ವಹಿಸುತ್ತಿರುವ ವಿಧಾನವನ್ನು ವಿವರಿಸಿದರು.


ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಂಎಸ್‌ಐಎಲ್ ವತಿಯಿಂದ ನೀಡಲಾದ 2.5 ಕೋಟಿ ರೂಪಾಯಿ ದೇಣಿಗೆಯ ಚೆಕ್ ಅನ್ನು ವಾಣಿಜ್ಯ ಮತ್ತು ಕೈಗರಿಕಾ ಸಚಿವರಾದ ಮಾನ್ಯ ಶ್ರೀ ಎಂ ಬಿ ಪಾಟೀಲ್ ಮತ್ತು ಶ್ರೀ. ಪುಟ್ಟರಂಗಶೆಟ್ಟಿ , ಶಾಸಕರು ಮತ್ತು ಅಧ್ಯಕ್ಷರು, ಎಂಎಸ್‌ಐಎಲ್, ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಂಎಸ್‌ಐಎಲ್ ಅಭಿವೃದ್ಧಿ ಮತ್ತು ಕಾರ್ಯವೈಖರಿ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಯಿತು. ಶ್ರೀ. ಮನೋಜ್ ಕುಮಾರ್, IFS, ವ್ಯವಸ್ಥಾಪಕ ನಿರ್ದೇಶಕರು ಎಂಎಸ್‌ಐಎಲ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಚೆಕ್‌ ವಿತರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.